ಮಂಗಳೂರು : ಸ್ಥಳೀಯ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣಜನ್ಮಷ್ಟಮಿಯ ಪ್ರಯುಕ್ತ ಸಂಗೀತ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಗ ಶಿಕ್ಷಕರಾದ ಗೋವಿಂದರಾಯ ಪ್ರಭು, ಧಾರ್ಮಿಕ ಶಿಕ್ಷಣ ಬೋಧಕಿ ಶ್ರೀಮತಿ ಪುಷ್ಪಪ್ರಭು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಬಿ.ಆರ್.ಶೆಣೈ ಅಧ್ಯಕ್ಷತೆಯನ್ನು ವಹಿಸಿದರು ಮತ್ತು ಬಹುಮಾನ ವಿತರಣೆ ಮಾಡಿದರು . ಭಜನೆ ನೃತ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಡಾ. ಕೆ ಮೋಹನ್ ಪೈ, ಶಾಲಾ ಮುಖ್ಯಶಿಕ್ಷಕಿಯರಾದ ಶ್ರೀಮತಿ ಸವಿತಾ ಎನ್ ಕಾಮತ್ ಹಾಗೂ ಶ್ರೀಮತಿ ಶಶಿಕಲಾ ಅವರು ಉಪಸ್ಥಿತರಿದ್ದರು.