Please download this short story in Kannada and translate it to Sanskrit language. This is a part of 90th year celebration of our Parent Body Sri Srinivasa Patashala which was founded in 1931. You can directly mail it to or Post the hard copy addressed to Sri Ananthram, Sanskrit Teacher, Srinivasa Patashala Oriental High School, V.T.Road, Mangalore 575001 by 25th December 2021.

ಕದ್ದವರು ಯಾರು ?

ಒಬ್ಬಾಕೆ ತಾಯಿ ಇದ್ದಳು. ಒಮ್ಮೆ ಅವಳು ಕೆಲವು ಸೀತಾಫಲಗಳನ್ನು ಕೊಂಡುಕೊAಡಳು. ಅವುಗಳನ್ನು ಮನೆಗೆ ತಂದ ಅವಳು ಒಂದು ದೊಡ್ಡ ತಟ್ಟೆಯಲ್ಲಿ ಎಲ್ಲವನ್ನೂ ಬಿಡಿಸಿ ಇರಿಸಿದಳು. ಊಟವಾದ ಬಳಿಕ ಮಕ್ಕಳಿಗೆ ಅವುಗಳನ್ನು ತಿನ್ನಲು ಕೊಡಬೇಕು ಎನ್ನುವುದು ಅವಳ ಉದ್ದೇಶವಾಗಿತ್ತು.

ಆ ತಾಯಿಗೆ ನಾಲ್ವರು ಮಕ್ಕಳಿದ್ದರು. ಅವರಲ್ಲಿ ಪುಟ್ಟ ಎಲ್ಲರಿಗಿಂತ ಕಿರಿಯವನು. ಅವನು ಆವರೆಗೂ ಸೀತಾಫಲಗಳನ್ನು ತಿಂದಿರಲಿಲ್ಲ. ತಟ್ಟೆಯಲ್ಲಿದ್ದ ಹಣ್ಣುಗಳ ಮೇಲೆ ಅವನ ಕಣ್ಣು ಬಿತ್ತು. ಅವನು ಅವುಗಳನ್ನು ಮುಟ್ಟಿ÷ ನೋಡಿದ. ಅವನ ಬಾಯಲ್ಲಿ ನೀರೂರಿತು. ಹಣ್ಣುಗಳ ಬಳಿಯಲ್ಲೇ ಅವನು ಸುಳಿದಾಡತೊಡಗಿದ. ಕೋಣೆಯಲ್ಲಿ ಯಾರೂ ಇರಲಿಲ್ಲ. ಅವನು ಮೆಲ್ಲನೆ ಒಂದು ಹಣ್ಣನ್ನು ತಿಂದು ಮುಗಿಸಿದ. ಹಣ್ಣು ಬಹಳ ಸವಿಯಾಗಿತ್ತು.

ಉಣ್ಣುವ ಸಮಯದಲ್ಲಿ ಮನೆಯವರೆಲ್ಲ ಒಟ್ಟು ಸೇರಿದರು. ಅಮ್ಮ ಹಣ್ಣುಗಳನ್ನು ಇನ್ನೊಮ್ಮೆ ಎಣಿಕೆ ಮಾಡಿದಳು. ಒಂದು ಹಣ್ಣು ಕಾಣೆಯಾಗಿತ್ತು. ಸಂಗತಿಯನ್ನು ಅವಳು ಅಪ್ಪನಿಗೆ ತಿಳಿಸಿದಳು. ಎಲ್ಲರೂ ಊಟಕ್ಕೆ ಕುಳಿತರು. ಅಂತೂ ಊಟ ಪ್ರಾರಂಭವಾಯಿತು.

ಊಣ್ಣುತಿರುವಾಗಲೇ ಅಪ್ಪ ತನ್ನ ಮಕ್ಕಳನ್ನೆಲ್ಲ ಒಮ್ಮೆ ನೋಡಿದರು.. “ ಏನು ಮಕ್ಕಳೇ ಒಂದು ಹಣ್ಣನ್ನು ಯಾರು ತಿಂದಿದ್ದೀರಿ ಹೇಳಿ?” ಎಂದು ಅವರಲ್ಲಿ ವಿಚಾರಿಸಿದರು. ‘ನಾನಲ್ಲ ನಾನಲ್ಲ’ ಎಂದು ಎಲ್ಲರೂ ಹೇಳಿದರು. ಆಗಲೇ ಪುಟ್ಟನ ಮುಖ ಸಪ್ಪಗಾಯಿತು. ಆದರೆ ಅವನೂ ಸಹ “ನಾನು ತಿಂದಿಲ್ಲ” ಎಂದು ಹೇಳಿಬಿಟ್ಟ.

“ನಿಮ್ಮಲ್ಲಿ ಯಾರೋಬ್ಬರೂ ಅದನ್ನು ತಿಂದಿಲ್ಲ ಎನ್ನುತ್ತೀರಿ ಅದು ಬೇಸರದ ಸಂಗತಿ. ಅದಕ್ಕಿಂತ ಬೇಸರದ ಸಂಗತಿ ಒಂದಿದೆ. ಆ ಹಣ್ಣುಗಳೊಳಗೆ ಕಲ್ಲುಗಳಂಥ ಕಪ್ಪಗಿನ ಬೀಜಗಳಿವೆ ಆ ಹಣ್ಣುಗಳನ್ನು ತಿನ್ನುವ ಕ್ರಮ ಗೊತ್ತಿಲ್ಲದವರು ಆ ಬೀಜಗಳನ್ನು ಸಹ ನುಂಗಿಬಿಡುತ್ತಾರೆ. ಅಂಥವರಿಗೆ ಹೊಟ್ಟೆ ನೋವು ಬರುದಿದೆ. ಭಯಂಕರ ಹೊಟ್ಟೆನೋವು. ಅದೇ ನನಗಿರುವ ಚಿಂತೆ” ಎನ್ನುತ್ತ ಅಪ್ಪ ಹುಸಿ ಚಿಂತೆ ನಟಿಸಿದರು. ಮತ್ತೊಮ್ಮೆ ಎಲ್ಲರ ಮುಖಗಳನ್ನು ಗಮನಿಸತೊಡಗಿದರು.

ಅಪ್ಪನ ಮಾತು ಕೇಳಿದ್ದೇ ತಡ, ಪುಟ್ಟನ ಮುಖ ಇನ್ನಷ್ಟು ಕಪ್ಪಗಾಯಿತು. ಅವನು ಗಂಟಲು ಸರಿಪಡಿಸುತ್ತಾ ನಾನು ಆ ಬೀಜಗಳನ್ನು ತಿನ್ನಲಿಲ್ಲ ಅಪ್ಪಾ. ಎಲ್ಲವನ್ನೂ ಹೊರೆಗೆ ಎಸೆದಿದ್ದೇನೆ. ಎಂದು ಹೇಳಿದಾಗ ಉಳಿದವರೆಲ್ಲ ಬಿದ್ದು ಬಿದ್ದು ನಕ್ಕರು. ಪುಟ್ತ ಮಾತ್ರ ಅತ್ತೇ ಬಿಟ್ಟ. ಕದ್ದವರು ಯಾರು ಎನ್ನುವ ಗುಟ್ಟು ಈಗ ರಟ್ಟಾಯಿತು.